ಅವತ್ತು ಡ್ರಮ್ ಜಾಮ್ ಮುಗ್ಸ್ಕೊಂಡು ಶಿಷ್ಯನ್ನ ಮೀಟ್ ಮಾಡಕ್ ಹೋದೆ… ಡ್ರಮ್ ಜಾಮ್ ಅಂದ್ರೆ ಇಲ್ಲಿದೆ ನೋಡಿ – ಡ್ರಮ್ ಜಾಮ್

ಶಿಷ್ಯ ಬ್ರಿಗೇಡ್ ರೋಡಲ್ಲಿ ಸಿಕ್ಕ… ಸಿಕ್ಕೋನೇ “ಮಗಾ ಸನ್ ರೈಸ್ ನೋಡಕ್ ಹೋಗಣ ನಾಳೆ, ತುಂಬಾ ದಿನಾ ಆಯ್ತು ಹೋಗಿ, ಹೋಗ್ಲೇಬೇಕು ಅಷ್ಟೇ” ಅಂದ…
“ಯೋ ಯಾಕಯ್ಯ ಸಡನ್ನಾಗಿ ಹೋಗ್ಲೇಬೇಕು ಅಂತ ಹೇಳ್ತಿದೀಯ?? ಎಲ್ಲಿಗೆ???” ಅಂತ ಕೇಳ್ದೆ…

ಅಂದಂಗೆ ಸನ್ ರೈಸ್ ನ ನಂದಿ ಹಿಲ್ಸ್ ಅಲ್ಲಿ ನೋಡೋದು ವಿಜಯನಗರ ಚಾಟ್ ಸ್ಟ್ರೀಟ್ ಅಲ್ಲಿ ಸಿಗೋ ಎಗ್ ರೈಸ್ ಮೇಲೆ ಈರುಳ್ಳಿ ಹಾಕೊಂಡ್ ತಿಂದಷ್ಟೇ ಮಜಾ ಇರತ್ತೆ… ಆದ್ರೆ ನಾನ್ ಇವಾಗ ಮಾತಾಡ್ತಿರೋದು ನಂದಿ ಹಿಲ್ಸ್ ಸನ್ ರೈಸ್ ಬಗ್ಗೆ ಅಲ್ಲ…

ಹೆಸರ್ಘಟ್ಟ ಕೆರೆ before sunrise

ನೀವ್ ಯಾವತ್ತಾದ್ರೂ ಹೆಸರ್ಘಟ್ಟ ಲಿ ಸನ್ ರೈಸ್ ನೋಡಿದಿರಾ…?

ಇಟ್ ವಾಸ್ ಆನ್ ಡಿಸೆಂಬರ್ 21… ನಾನು ಮತ್ತು ಶಿಷ್ಯ ಹೆಸರ್ಘಟ್ಟ ಕೆರೆಗೆ ಸನ್ ರೈಸ್ ನೋಡಕ್ಕೆ ಬೆಳಿಗ್ಗೆ 4:30ಗೆ ಮನೆ ಬಿಟ್ಟಿದ್ದು… ಚಳಿ ಹೆಂಗಿತ್ತು ಅಂದ್ರೆ ರಕ್ತ ಐಸ್ ಆಗಿತ್ತು…

5:15ಗೆ ಅಲ್ಲಿಗೆ ತಲ್ಪಿದ್ವಿ… ಒಂದೇ ಒಂದು ನಾಯಿನು ಅಲ್ಲಿರ್ಲಿಲ್ಲ.. ಏನೂ ಕಾಣ್ಸ್ತಿರ್ಲಿಲ್ಲ … ಶಿಷ್ಯ ಕೆರೆ ಪಕ್ಕ ಕೆಸ್ರಲ್ಲಿ ಕಾಲಿಟ್ಟು ಜಾರಿ ಬಿದ್ದ…

ಮೊಬೈಲ್ ಟಾರ್ಚ್ ಆನ್ ಮಾಡಿ, ಡಿಎಸ್ಎಲ್ಆರ್ ಕ್ಯಾಮರಾ ನ ಟ್ರೈಪಾಡ್ ಮೇಲೆ ಇಟ್ಟು, ಕೆರೆ ಮುಂದೆ ಟೈಮ್ ಲ್ಯಾಪ್ಸ್ ಗೆ ಹಾಕಿ ಒಂದ್ಕಡೆ ಬಂದು ಕೂತ್ಕೊಂಡೆ… ಶಿಷ್ಯ ಅಲ್ಲಿಂದ ಎದ್ಬಂದು ಸಿಗರೇಟ್ ಹಚ್ದ…

“ಏನ್ ಮಗ ಹೆಸರ್ಘಟ್ಟ ಲಿ ಒಳ್ಳೆ ಸನ್ ರೈಸ್ ನೋಡ್ಬೋದು ಅಂತಿಯ, ನಮ್ ಬೆಂಗ್ಳೂರ್ ಜನ ಇಂಥ ಸನ್ ರೈಸ್ ನೋಡಕ್ಕೆ ಬರೋದೆ ಇಲ್ವಾ?” ಅಂತ ಕೇಳ್ದೆ…
“ನಾನು ಸುಪ್ರಿತಾ ಇಲ್ಲಿಗೆ ಪ್ರೈವೆಸಿ ಇರತ್ತೆ ಅಂತ ಅವಾಗವಾಗ ಬರ್ತಿದ್ವಿ… ಅವಾಗ್ಲೂ ಯಾರು ಇರ್ತಿರ್ಲಿಲ್ಲ… ಅವ್ಳ್ ಕೈ ಕೊಟ್ಮೇಲೆ ಈ ಮೆಮೊರಬಲ್ ಜಾಗದಲ್ಲಿ ಸೇವಾರ್ಥ ಮಾಡ್ಕೊಳಕ್ಕೆ ಒಬ್ನೇ ಬರ್ತಿದ್ದೆ, ಒಬ್ನೇ ಇರ್ತಿದ್ದೆ, ಸನ್ ರೈಸ್ ನೋಡ್ತಿದ್ದೆ, ಆಕಡೆ ಬದಿಗೆ ಹೋಗಿ ಸನ್ಸೆಟ್ ನೋಡ್ತಿದ್ದೆ… ಇಲ್ಲಿಗೆ ಜನ ಬರೋದು ಕಮ್ಮಿ” ಅಂದ…

ಕೂತು ಕೂತು ಸಾಕಾಯ್ತು.. “ಲೋ ಏನ್ ಗುರು 6:30 ಆದ್ರೂ ಸನ್ ಬರ್ತಿಲ್ಲ…. ?” ಅಂತ ನಂದು ಬಿಪಿ ರೈಸ್ ಆಯ್ತು… ಶಿಷ್ಯ ಕಾಮ್ ಆಗಿ ಒಂದೇ ಕಡೆ ನೋಡ್ಕೊಂಡ್ ಕೂತಿದ್ದ… ನಾನು ಗೂಗಲ್ ಮಾಡಿ ಸನ್ ರೈಸ್ ಟೈಮಿಂಗ್ ನೋಡ್ದೆ… ಚಳಿ ಗಾಲ… ಸನ್ ರೈಸ್ 6:50 ಕ್ಕೆ ಇತ್ತು..

ಹೆಸರ್ಘಟ್ಟ ಕೆರೆ after sunrise

ಸನ್, ರೈಸ್ ಆಯ್ತು… ಆ ಬೆಳ್ಕಿಗೆ, ಮಂಜು ನೀರ್ ಮೇಲೆ ಹೋಗೋದು ಕಾಣ್ಸ್ತಿತ್ತು… ಸೂರ್ಯ ಕ್ಯೂಟ್ ಆಗಿ ಇನ್ನೊಂದ್ ದಿನಕ್ಕೆ ರೆಡಿ ಆದಂಗೆ ಕಾಣ್ಸ್ತಿದ್ದ … ಪಕ್ಷಿಗಳು ಗೂಡ್ ಬಿಟ್ಟು ಬ್ರೇಕ್ ಫಾಸ್ಟ್ ಮಾಡಕ್ಕೆ ಹೋರ್ಟ್ವು… ಬೆಸ್ತರು ಮೀನ್ ಹಿಡಿಯಕ್ ಬಂದ್ರು.. ನಾಯಿಗಳು ಕೂಡ ಕಾಣ್ಸ್ಕೊಂಡ್ವು.. ಶಿಷ್ಯನ್ ಕಣ್ಣಲ್ಲಿ ನೀರ್ ಬಂದಿತ್ತು..

ನೀವೂ ಒಂದ್ಸಲ ಹೆಸರ್ಘಟ್ಟ ಕೆರೆಲಿ ಸನ್ ರೈಸ್ ನೋಡಕ್ಕೆ ಹೋಗಿ.. ಅಲ್ಲಿಗ್ ಹೊದ್ರೆ ಚಿಪ್ಸ್ ತಿಂದು ಪ್ಲಾಸ್ಟಿಕ್ ಮಾತ್ರ ಎಸಿಬೇಡಿ… ಶಿಷ್ಯಂಗೆ ಕೋಪ ಬರತ್ತೆ..

Featured Author:
Pavan Nittur
(@Pavan_Nittur on twitter)
(@Pavan_nittur on instagram)

 

Home Forums ನೀವ್ ಯಾವತ್ತಾದ್ರೂ ಹೆಸರಘಟ್ಟದಲ್ಲಿ ಸನ್ ರೈಸ್ ನೋಡಿದಿರಾ…?

This topic contains 0 replies, has 1 voice, and was last updated by  Bengaloorism 6 months, 4 weeks ago.

You must be logged in to reply to this topic.