ನಿರ್ದೇಶಕನ ಮೊದಲ ಚಿತ್ರ , ಸಾಲ್ಲ್ಲದ್ದಕ್ಕೆ ಎಲ್ಲರೂ renowned ಆರ್ಟಿಸ್ಟ್ ಗಳೇ… producer ಹೊಸಬ..

ಅದು ಮೂರನೇ ದಿನದ ಶೂಟಿಂಗು..
ಡೈರೆಕ್ಟ್ರು ಬೆಳಿಗ್ಗೆ 6 ಘಂಟೆ ಗೆ ಎಲ್ಲಾ ಅಸ್ಸಿಸ್ಟಂಟ್, ಅಸ್ಸೋಸಿಯೇಟ್ ಡೈರೆಕ್ಟರ್ಸ್ಗೂ ಕಾಲ್ ಮಾಡಿ ಎಬ್ಸಿ, “ಹಲ್ಕಾ ನನ್ ಮಕ್ಳಾ” ಅಂತ ಬೈಯಕ್ಕೂ ಆಗ್ದೇ, “ಇವತ್ತು 45, 45A, 45B, 62, 18, 20C ಈ ಎಲ್ಲಾ ಸೀನು ಮುಗಿಲೇಬೇಕು” ಅಂತ ಹೇಳಿ ಕಾಲ್ ಕಟ್ ಮಾಡಿದ್ರು….

ಮೂರ್ ದಿನ ಜೋರ್ ಮಳೆ ಬಂದು ಶೂಟಿಂಗ್ ಹಾಳಾಗೋಗಿತ್ತು.. ಒಂದ್ ದಿನದಲ್ಲಿ 4 ಸೀನ್ ಆಗ್ಬೇಕಾಗಿದ್ದು 2 ದಿನದಲ್ಲಿ 3 ಸೀನ್ ಆಗಿತ್ತು..

ಬೆಳಿಗ್ಗೆ 7 ಘಂಟೆ:
ಡೈರೆಕ್ಟ್ರು, ರೂಮಿಂದ DOP ಜೊತೆ ಆಚೆ ಏನೋ ಡಿಸ್ಕಸ್ ಮಾಡ್ತಾ ಬರಕ್ಕೂ, ಲಾಡ್ಜ್ ಮುಂದೆ ಆ ಅಸ್ಸಿಸ್ಟಂಟ್ ಡೈರೆಕ್ಟರ್ ಪಾಟೀಲ್ ಅವ್ರ್ ಮುಂದೆನೇ ಸಿಗರೇಟ್ ಹಚ್ಚಿ ಹೊಗೆ ಬಿಡಕ್ಕೂ ಸರಿಹೋಯ್ತು… ಡೈರೆಕ್ಟ್ರು ಅವನ್ನ ನೋಡಿದ್ರೂ ನೋಡ್ದೆ ಇರೋರ್ ಥರ ಹೊರ್ಟ್ರು… ಪಾಟೀಲಾ ಅವನ್ನ ಡೈರೆಕ್ಟ್ರು ನೋಡುದ್ರಾ ಇಲ್ವಾ ಅನ್ನೋ confusion ಅಲ್ಲಿ ನರ್ವಸ್ ಆಗಿದ್ದ…

8 ಘಂಟೆ… ಎಲ್ರು ಸ್ಪಾಟ್ ಅಲ್ಲಿದ್ರು …
ಮೊದ್ಲನೇ ಶಾಟ್…
ಟೇಕ್ ನಾಟ್ ಓಕೆ… ಟೇಕ್ 2 , ನಾಟ್ ಓಕೆ.. ಡೈರೆಕ್ಟರ್ ಎದ್ದು artist ಹತ್ರ ಏನೋ ಹೇಳಿ ಬಂದ್ರು… ಟೇಕ್ 3 , ಮತ್ತೆ ನಾಟ್ ಓಕೆ…
DOP ಟ್ರಾಲಿ ಮೇಲೆ ಆಕಡೆ ಇಂದ ಈಕಡೆ , ಈಕಡೆ ಇಂದ ಆಕಡೆ ಬೂಮರಾಂಗ್ ಆಡ್ತಿದ್ರು ..
ಟೇಕ್ 11 , ಓಕೆ…
ಎಡಿಟಿಂಗ್ ರಿಪೋರ್ಟ್ ಬರಿಯೋ ಪಾಟೀಲ, ಕಾರ್ಡ್ 4 , ಕ್ಲಿಪ್ 11 ಅಂತ ಬರ್ಕಂಡೇ ಬಿಟ್ಟ…
DOP ಲೈಟ್ ಆಫೀಸರ್ಸ್ ಗೆ ಬೇರೆ position ಗೆ light fix ಮಾಡಕ್ಕೆ ಹೇಳಿದ್ರು…

ಅದೊಂದು ದೊಡ್ಡ ಪ್ರಪಾತ ಇರೋ ಜಾಗ… ಡೈರೆಕ್ಟ್ರು ಕ್ಲಿಫ್ ಮೇಲೆ ಬಂದು ನಿಂತ್ಕೊಂಡ್ರು… ” ಆಗ್ತಿಲ್ಲ… ನಾನು ಕಷ್ಟ ಪಟ್ಟು ಹಿಡ್ದಿರೋ producer ಇವ್ರು… ಹೇಳಿದ್ budget ಕಿಂತ ಜಾಸ್ತಿ ಹಾಕೋ ಆಸಾಮಿ ಅಂತು ಅಲ್ಲ… ಇನ್ನೂ ಎಷ್ಟೆಲ್ಲ portion ಬಾಕಿ ಇದೆ.. patch work ಎಲ್ಲಾ ಸೀನೇ ಇಲ್ಲಾ…. ” ಅಂತ ಯೋಚ್ನೆ ಮಾಡ್ಬೇಕಾದ್ರೆ ಹೀರೋಯಿನ್ ಬಂದು “ಸಾರ್ next ಸೀನ್ costume ಹೇಳ್ತೀರಾ” ಅಂತ ಕೇಳೇ ಬಿಟ್ಲು… ಡೈರೆಕ್ಟರ್ ಗೆ ಪಿತ್ತ ನೆತ್ತಿಗ್ ಏರ್ತು… costume ನೋಡ್ಕೊಳೋ ಅಸ್ಸಿಸ್ಟಂಟ್ ಸತೀಶ ಟೀ ಕುಡಿತಾ ನಿಂತಿದ್ದ… ಅವ್ನ್ ಹತ್ರ ಇರೋ ಕಾಸ್ಟ್ಯೂಮ್ list ಇಸ್ಕೊಂಡು, ತಾವೇ ಪಾಪ ಕಾಸ್ಟ್ಯೂಮ್ ಹುಡ್ಕಿ ಹೀರೋಯಿನ್ ಗೆ ಕೊಟ್ಟು ಬಂದ್ರು…

ಮಧ್ಯಾಹ್ನ 2 ಘಂಟೆ … ಇನ್ನೂ ಒಂದ್ ಸೀನು ಮುಗ್ದಿಲ್ಲ… ಆರ್ಟಿಸ್ಟ್ ತೊಗೊಳೋ ಟೇಕ್ ಗು, ಲೈಟ್ variation ಗೂ , ಕಾರ್ಡ್ ಮೂರ್ ಆಗಿತ್ತು…
ಡೈರೆಕ್ಟರ್ “ಬ್ರೇಕ್” ಅಂತ ಕೂಗಿದ್ರು…

ಪ್ರೊಡಕ್ಷನ್ ನೋನು “ಸಾರ್ ಪೀಸ್ ಹಾಕ್ಲಾ” ಅಂತ ಕೇಳ್ದ.. ಡೈರೆಕ್ಟ್ರು ತಲೆ ನಾಲ್ಕ್ ಪೀಸ್ ಆಗಿರೋ expression ಕೋಟ್ಟ್ರು…production ನೋನು ಮತ್ತೆ ಇವ್ರ್ ಕಡೆ ತಿರ್ಗೂ ನೋಡ್ದೆ ಕಣ್ಮರೆ ಆದ…

ಸಂಜೆ 5 ಘಂಟೆ… ಲೈಟ್ dull ಆಗಿತ್ತು… ಒಂದೂವರೆ ಸೀನ್ ಮುಗ್ದಿತ್ತು….
“ಇನ್ನು maximum ಅಂದ್ರೆ 2 ಶಾಟ್ ತೆಗಿಬೋದು ಅಷ್ಟೇ, ಬಂದಿರೋ conveyance ಅಲ್ಲಿ ಒಂದ್ ಬೀರು ಒಂದ್ ಪ್ಯಾಕೆಟ್ ಹೆರಳೇಕಾಯಿ ಉಪ್ಪಿನಕಾಯ್ ಬೇಗ ತೊಗೋಬೋದು” ಅಂತ ಹೊಂಚಾಕಿದ್ದಾ ಪಾಟೀಲಾ..

ಡೈರೆಕ್ಟ್ರು “ಟ್ರಾಲಿ, ಸ್ಟ್ಯಾಂಡು, ಟ್ರೈಪಾಡು , ಜಿಮ್ಮಿ, ಗುಮ್ಮಿ , ಕ್ರೇನು ಎಲ್ರಿಗೂ ಲಾಡ್ಜ್ ಗೆ ವಾಪಸ್ ಕಳ್ಸಿ” ಅಂದ್ರು… ಪಾಟೀಲ ಫುಲ್ ಖುಷ್…

DOP ಗೆ ಕ್ಯಾಮರಾ ಹೆಗ್ಲ್ ಮೇಲೆ ಇಟ್ಕಳಕ್ ಹೇಳಿ, ಆರ್ಟಿಸ್ಟ್ ಹತ್ರ ಹೋಗಿ ಏನೋ magic ಮಾಡಿ ಬಂದ್ರು ಡೈರೆಕ್ಟ್ರು…
Take 1 ಓಕೆ,
Next ಡೈಲಾಗ್
Take 1 ಓಕೆ…
ಹೀಗೆ 40 ಟೇಕ್ ಆಯ್ತು… ಅವತ್ತು 4 ಸೀನ್ 1 hour ಅಲ್ಲಿ ಮುಗ್ದಿತ್ತು… ಅಷ್ಟೇ ಅಲ್ವಾ… !

“ಪ್ಯಾಕ್ ಅಪ್” ಹೇಳಿದ್ರು…

ಒಂದ್ ಸಿಗರೇಟ್ ಹಚ್ಚಿ ಪಾಟೀಲನ್ನ ನೋಡಿ ಕರ್ದ್ರು… ಅವ್ರ್ ಜೇಬಿಂದ ಇನ್ನೊಂದ್ cigarette ಎತ್ತಿ ಅವ್ನಿಗೆ ಕೊಟ್ಟು “ಹೊಡಿ” ಅಂತ ಅಂದ್ರು… ಪಾಟೀಲ ಸ್ಟೈಲ್ ಆಗಿ cigarette ಹಚ್ಬಿಡೋದಾ??…
ಡೈರೆಕ್ಟ್ರು 500 ರೂಪಾಯಿ ಅವ್ನ್ ಜೇಬಲ್ಲಿ ಇಟ್ರು…. ಪಾಟೀಲಂಗೆ ಮುಲ ಮುಲ ಅಂತ ಬೇರೆ ಅನ್ಸಕ್ ಶುರು ಆಯ್ತು… ಆದ್ರೆ ಯಾಕ್ 150 ಜಾಗ್ದಲ್ಲಿ 500 ಇಟ್ರು ಅಂತ ಗೊತ್ತಾಗ್ದೇ , “ಸಾರ್ 500 ಯಾಕೆ?” ಅಂತ ಕೇಳ್ದ… ಅವಾಗ ಡೈರೆಕ್ಟ್ರು “ವಾಪಸ್ ಊರಿಗ್ ಹೋಗು, ನಿನ್ ಮುಖ ತೋರ್ಸ್ಬೇಡ” ಅಂತ ಕಿವಿಲಿ ಅವ್ನಿಗೆ ಹೇಳಿ ಅಲ್ಲಿಂದ ಹೋರ್ಟ್ರು…

Home Forums ಆ ಒಂದು ದಿನ, ಸಿನಿಮಾ ಮಾಡುವವನ ಬದುಕಲ್ಲಿ

This topic contains 0 replies, has 1 voice, and was last updated by  Bengaloorism 3 months, 3 weeks ago.

You must be logged in to reply to this topic.